ಗುಬ್ಬಚ್ಚಿ ಗೂಡಿನಲ್ಲಿಲ್ಲ! ಹೌದು, ಹಿಂದೆ ಮನೆಯಂಗಳದಲ್ಲಿ, ಫೋಟೋ ಫ್ರೇಮ್ ಹಿಂದೆ, ಪಕ್ಕಾಸಿನ ಸಂದಿನಲ್ಲಿ ಸಂಸಾರ ಹೂಡುತ್ತಿದ್ದ ಗುಬ್ಬಚ್ಚಿಗಳು ಇಂದು ಗೂಡಿನಲ್ಲಿಲ್ಲ.
ಏಕಾಏಕಿ ಪುಟಾಣಿ ಗುಬ್ಬಕ್ಕನ ನೆನಪಾಗಿದ್ದು ಯಾಕೆಂದರೆ, ಇಂದು ಚೀಂವ್ ಗುಡುವ ಗುಬ್ಬಕ್ಕನ ದಿನ. ಮಾರ್ಚ್ 20 ರಂದು ಪ್ರತಿ ವರ್ಷ ವಿಶ್ವ ಗುಬ್ಬಚ್ಚಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಪರಿಸರ ಆರೋಗ್ಯದ ಸೂಚಕವಾದ ಗುಬ್ಬಚ್ಚಿಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಉಂಟಾಗುತ್ತಿರುವ ಬಗ್ಗೆ ಜನಜಾಗತಿ ಮೂಡಿಸುವುದು, ದೈನಂದಿನ ಬದುಕಿನಲ್ಲಿ ಗುಬ್ಬಚ್ಚಿಗಳು ಎದುರಿಸುವ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಿ ಸಾಮುದಾಯಿಕ ಪರಿಹಾರ ಹುಡುಕುವುದು ಈ ಆಚರಣೆಯ ಹಿಂದಿರುವ ಸದುದ್ದೇಶ.
ನಮ್ಮ ಮನೆಗಳ ಗೋಡೆಯಲ್ಲಿ ಕಟ್ಟುಹಾಕಲಾದ ಫೋಟೋಗಳ ಹಿಂದೆ, ಮಹಡಿ ಮನೆ, ಗೋಡೆ -ಪಕ್ಕಾಸುಗಳ ಸಂದುಗಳಲ್ಲಿ, ಅಷ್ಟೇ ಏಕೆ ಮನೆ ಮುಂದಿನ ದಾಸವಾಳ, ಮಂದಾರಪುಷ್ಟ ಮೊದಲಾದ ಗಿಡಗಂಟಿಗಳಲ್ಲಿಯೂ ನೂರಾರು ಸಂಖ್ಯೆಯಲ್ಲಿ ಹುಲ್ಲು, ನಾರುಗಳ ಪುಟ್ಟದಾದ ಗೂಡು ಹೆಣೆಯುತ್ತಿದ್ದ ಗುಬ್ಬಚ್ಚಿ ಈಗಿಲ್ಲವಾಗಿರುವುದು ಪರಿಸರ ಪ್ರೇಮಿಗಳಲ್ಲಿ, ಪಕ್ಷಿ ಪ್ರಿಯರಲ್ಲಿ ಕಳವಳ ಮೂಡಿಸಿದೆ.
ಹೊಸ ಮನೆಗಳಲ್ಲಿ ಈ ಹಕ್ಕಿಗಳಿಗೆ ವಾಸಕ್ಕೆ ಯೋಗ್ಯವಾದ ಸ್ಥಳಾವಕಾಶವಿರುವುದಿಲ್ಲ. ಹಿಂದಿನ ಹಳೆಯ ಮನೆಗಳಲ್ಲಿ ಗುಬ್ಬಚ್ಚಿಗಳು ಸ್ಥಳಾವಕಾಶ ನೋಡಿಕೊಂಡು ಗೂಡು ಕಟ್ಟಿಕೊಳ್ಳುತ್ತಿದ್ದವು. ಆದರೆ ಹೊಸ ವಾಸ್ತುಶಿಲ್ಪ ವಿನ್ಯಾಸದ ಮನೆಗಳಲ್ಲಿ ಗುಬ್ಬಚ್ಚಿಗಳಿಗೆ ಮನೆಗಳನ್ನು ಕಟ್ಟಿಕೊಳ್ಳಲು ಸ್ಥಳಾವಕಾಶವೇ ದೊರೆಯುವುದಿಲ್ಲ. ಕ್ರಿಮಿನಾಶಕಗಳ ವ್ಯಾಪಕ ಬಳಕೆಯಿಂದಾಗಿ ಗುಬ್ಬಚ್ಚಿಗಳು ನಾಶವಾಗುತ್ತಿವೆ. ನಿಸರ್ಗ ಸಂರಕ್ಷಣಾ ಅಂತಾರಾಷ್ಟ್ರೀಯ ಒಕ್ಕೂಟದ ಕೆಂಪು ಪಟ್ಟಿ ವಿಭಾಗದಲ್ಲಿ ಗುಬ್ಬಚ್ಚಿಯೂ ಸೇರಿಸಲ್ಪಟ್ಟಿದೆ.
ಕಳೆದೊಂದು ಒಂದೂವರೆ ದಶಕದಲ್ಲಿ ಮೊಬೈಲ್ ಹಾವಳಿ ಅತಿಯಾಗಿದ್ದು, ಪ್ರವಾಹದಂತೆ ಅವುಗಳ ಬಳಕೆ ಹೆಚ್ಚಾಗುತ್ತಿದೆ. ಈ ಮೊಬೈಲ್ ಟವರ್‌ಗಳಿಂದ ಸೂಸುವ ವಿದ್ಯುತ್ ಕಾಂತೀಯ ತರಂಗಗಳು, ಅಲ್ಪ ಪ್ರಮಾಣದ ವಿಕಿರಣ ಸೋರಿಕೆ ಗುಬ್ಬಚ್ಚಿ ಮೊಟ್ಟೆಗಳಲ್ಲಿ ಜೀವ ರೂಪುಗೊಳ್ಳದಂತೆ ಮಾಡುತ್ತಿವೆ. ಕೆಲವು ವಿಜ್ಞಾನಿಗಳ ಪ್ರಕಾರ ಸೀಸರಹಿತ ಪೆಟ್ರೋಲ್ ಬಳಕೆಗೆ ಬಂದನಂತರ ಗುಬ್ಬಚ್ಚಿಗಳ ಸಂಖ್ಯೆ ಇಳಿಮುಖವಾಗಿದೆ. ಮೊದಲು ಸೀಸಯುಕ್ತ ಪೆಟ್ರೋಲ್ ಬಳಕೆಯಲ್ಲಿತ್ತು. ಈ ಪೆಟ್ರೋಲ್ ಬಳಕೆಯಿಂದ ಸೀಸ ಮಾಲಿನ್ಯ ಹೆಚ್ಚಾಗಿ ಮನುಷ್ಯನಿಗೆ ತೊಂದರೆಯಾಗುತ್ತಿತ್ತು. ಈಗ ಸೀಸಕ್ಕೆ ಬದಲಾಗಿ ‘ಮಿಥೈಲ್’ ಎಂಬ ರಾಸಾಯನಿಕವನ್ನು ಬಳಸುತ್ತಿದ್ದಾರೆ. ಇದರಿಂದ ಉಂಟಾಗುವ ಮಾಲಿನ್ಯ ಗುಬ್ಬಚ್ಚಿ ಮರಿಗಳಿಗೆ ಅಗತ್ಯವಾಗಿರುವ ಕೀಟಗಳನ್ನು ಕೊಲ್ಲುತ್ತದೆ. ಬೆಳೆದ ಗುಬ್ಬಚ್ಚಿಗಳಿಗೆ ದವಸ ಧಾನ್ಯಗಳೇ ಸಾಕು. ಆದರೆ ಬೆಳೆಯುವ ಮರಿಗಳಿಗೆ ಪ್ರೋಟೀನ್‌ಯುಕ್ತ ಕೀಟಗಳೇ ಬೇಕು. ಈ ಕೀಟಗಳನ್ನು ಸೀಸರಹಿತ ಪೆಟ್ರೋಲ್ ಹೊಗೆ ಉಸಿರುಗಟ್ಟಿಸುವುದರಿಂದ ಮರಿಗಳು ಪೌಷ್ಟಿಕ ಆಹಾರವಿಲ್ಲದೆ ಸಾಯುತ್ತವೆ.
ವಾಸ್ತವದಲ್ಲಿ ಗುಬ್ಬಚ್ಚಿ ದಟ್ಟ ಕಾಡಿನಲ್ಲಿ ಅಥವಾ ಮಾನವ ರಹಿತ ಪ್ರದೇಶಗಳಲ್ಲಿ ವಾಸಿಸುವ ಹಕ್ಕಿಯಲ್ಲ. ಅದು ಸಂಘಜೀವಿ. ಜನನಿಬಿಡತೆ ಯಾವತ್ತೂ ಗುಬ್ಬಚ್ಚಿಗೆ ತೊಂದರೆ ಅನ್ನಿಸಿದ್ದೂ ಇಲ್ಲ. ಜನರ ನಡುವೆಯಿದ್ದರೂ ತನ್ನ ಬದುಕು ಬೇರೆಯೇ ಎಂಬಂತೆ ಬದುಕುತ್ತಿದ್ದ ಪುಟ್ಟ ನಿರುಪದ್ರವಿ ಹಕ್ಕಿಯದು. ಆದರೂ ಅವುಗಳ ನಿರ್ಗಮನಕ್ಕೆ ಮಾನವನೇ ಪ್ರಮುಖ ಕಾರಣ. ಅವುಗಳನ್ನು ನಾವು ಓಡಿಸಿಲ್ಲವಾದರೂ, ಅವುಗಳು ಓಡಿ ಹೋಗಿರುವುದರಲ್ಲಿ ನಮ್ಮ ಪಾಲೇ ಗರಿಷ್ಠ. ಸದ್ಯ ನಮ್ಮಿಂದ ದೂರವಾಗಿರುವ ಗುಬ್ಬಕ್ಕನನ್ನು ಹತ್ತಿರ ಕರೆಯಬೇಕಾದರೆ ಹೀಗೆ ಮಾಡ ಬಹುದು.
ಕೃತಕ ಗುಬ್ಬಚ್ಚಿ ಗೂಡುಗಳನ್ನು ಮನೆಗಳಲ್ಲಿ, ಮನೆಯೆದುರಿನ ಮರಗಳಲ್ಲಿ ತೂಗು ಹಾಕುವುದು, ಮನೆಯ ಎದುರು ಅಥವಾ ತಾರಸಿ ಮೇಲೆ ತೊಟ್ಟಿಯಲ್ಲಿ ನೀರಿಡುವುದು, ಸಣ್ಣ ಪ್ರಮಾಣದಲ್ಲಿ ಸಣ್ಣ ಗಾತ್ರಕ್ಕೆ ಪುಡಿ ಮಾಡಿದ ಅಕ್ಕಿ-ಕಾಳುಗಳನ್ನು ಪ್ಲೇಟುಗಳಲ್ಲಿ ಇಡುವುದು. ಮನೆಯೆದುರು ಗಿಡ-ಮರಗಳನ್ನು ಬೆಳೆಸುವುದು, ನಗರಗಳಲ್ಲಿ ಅಲ್ಲಲ್ಲಿ ಪಾರ್ಕುಗಳನ್ನು ನಿರ್ಮಿಸುವುದು. ಹೊಸ ವಿನ್ಯಾಸದಲ್ಲಿ ಮನೆಗಳನ್ನು ಕಟ್ಟುವಾಗಲೂ ಗುಬ್ಬಚ್ಚಿಗಾಗಿಯೇ ಒಂದಿಷ್ಟು ಸ್ಥಳವನ್ನು ಕಾದಿರಿಸುವುದು.
ನಗರ ಪ್ರದೇಶದಲ್ಲಿ ಅಲಲ್ಲಿ ಮಾತ್ರ ಗುಬ್ಬಚ್ಚಿಗಳು ಕಂಡು ಬರುತ್ತಿವೆ. ಹಳ್ಳಿ ಮನೆಗಳಲ್ಲೂ ಗುಬ್ಬಚ್ಚಿ ಕಲರವ ಅಪರೂಪವಾಗಿ ಬಿಟ್ಟಿದೆ. ನಾವು ಚಿಕ್ಕವರಾಗಿದ್ದಾಗ ಗುಬ್ಬಚ್ಚಿಯ ಜೊತೆಗೆ ಕಣ್ಣಾ ಮುಚ್ಚಾಲೆಯಾಡಿದ್ದೇವೆ, ಊಟ ಮಾಡಬೇಕಾದರೆ ಗುಬ್ಬಚ್ಚಿಗೂ ನಾಲ್ಕು ಅಗಳು ಹಾಕಿ ಸಂಭ್ರಮಿಸಿದ್ದೇವೆ, ಗುಬ್ಬಕ್ಕ ಗೂಡಿನಲ್ಲಿಲ್ಲದಾಗ ಅದರ ಮನೆಯನ್ನೆಮ್ಮೆ ಕಳ್ಳನಂತೆ ಹೊಕ್ಕು ತನಿಖೆ ಮಾಡಿದ್ದೇವೆ! ಆದರೆ ಈಗಿನ ಬಹುತೇಕ ಮಕ್ಕಳಿಗೆ ಗುಬ್ಬಕ್ಕನ ಪರಿಚಯವೇ ಇರದು, ಅವರಿಗೆ ಗುಬ್ಬಿಯೆಂದರೆ ಟ್ವಿಟ್ಟರ್ ಸಿಂಬಲ್‌ಗಿಂತ ಹೆಚ್ಚೇನೂ ಆಗಿರಲಾರದು.
ಸ್ವಸ್ಥ ಪರಿಸರ ಹಾಗೂ ಅದರಲ್ಲಿ ಸ್ವಚ್ಛಂದವಾಗಿ ವಿಹರಿಸುವ ಗುಬ್ಬಕ್ಕನನ್ನು ನಮ್ಮ ಮುಂದಿನ ಪೀಳಿಗೆಗೂ ದಾಟಿಸಲು ಸಾಮುದಾಯಿಕವಾಗಿ ಕೆಲಸ ಮಾಡಲೇಬೇಕು. ಎಲ್ಲೋ ಒಂದು ಮೂಲೆಯಲ್ಲಿ ಒಬ್ಬಿಬ್ಬರು ಈ ನಿಟ್ಟಿನಲ್ಲಿ ಕಾರ್ಯಪ್ರವತರಾದರೆ ಇಷ್ಟು ದೊಡ್ಡ ಜಗತ್ತಿನಲ್ಲಿ, ಬೇಡ ದೇಶದಲ್ಲಿಯಾದರೂ ಮರಿ ಗುಬ್ಬಚ್ಚಿಯನ್ನು ಸಂರಕ್ಷಿಸಲು ಸಾಧ್ಯವಾಗುವುದಿಲ್ಲ. ಮತ್ತೆ ನಮ್ಮ ಮನೆಯ ಸುತ್ತ ಮುತ್ತಲೂ ಗುಬ್ಬಕ್ಕ ಚೀಂವ್ ಗುಡಬೇಕಾದರೆ ಮರಳಿ ಅದನ್ನು ಗೂಡಿಗೆ ಕರೆಯಲೇ ಬೇಕು. ಇದಕ್ಕಾಗಿ ಕೇವಲ ಇವತ್ತು ಒಂದು ದಿನ ಎಚ್ಚರಗೊಂಡರೆ ಸಾಲದು ವರ್ಷವಿಡೀ ಗುಬ್ಬಕ್ಕನ ರಕ್ಷಣೆಗೆ ಮುಂದಾಗಬೇಕು.
ಗುಬ್ಬಿಗಳ ಕಣ್ಮರೆಗೆ ಪ್ರಮುಖ ಕಾರಣಗಳು
* ಮೊಬೈಲ್ ಟವರ್ ಗಳ ಪ್ರಬಲ ತರಂಗಾಂತರಗಳು.
* ಸೀಸ ರಹಿತ ಪೆಟ್ರೋಲ್ ಬಳಕೆ
* ಕ್ರಿಮಿ-ಕೀಟಗಳ ನಾಶಕ್ಕೆ ಕೀಟನಾಶಕ ಬಳಕೆ.
* ಕಟ್ಟಡಗಳ ನೂತನ ವಿನ್ಯಾಸಗಳಿಗೆ ಹೊಂದಿಕೊಳ್ಳಲು ಅಸಾಧ್ಯವಾಗಿರುವುದು.
* ಕಟ್ಟಡಗಳಲ್ಲಿ ಗಾಜುಗಳನ್ನು ಹೆಚ್ಚು ಬಳಕೆ ಮಾಡುತ್ತಿರುವುದು.
* ಮನೆ-ಅಡುಗೆ ಮನೆಗಳಲ್ಲಿ ಆಗಿರುವ ಬದಲಾವಣೆ, ಶುಚಿತ್ವ ಹೆಚ್ಚಿರುವುದು.
* ಪರಿಸರ ನಾಶ, ನಗರಗಳಲ್ಲಿ ಇದ್ದ ಮರ-ಗಿಡಗಳು ಕೂಡ ಮರೆಯಾಗುತ್ತಿರುವುದು.
* ಗೂಡು ಕಟ್ಟಲು ಬೇಕಾದ ಸರಕುಗಳು ಸಿಗದೇ ಇರುವುದು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ