ಸೆಪ್ಟೆಂಬರ್ 21, 2010

ಬಾಳಿನ ತಿರುವ ಹಾದಿಯಲ್ಲಿ

ಹೊಸ ತಿರುವಿನತ್ತ ಹೆಜ್ಜೆ ಇಕ್ಕುತ ಒಂದು ಮಾತು....
 
ನಾವು ದಾರಿಯಲ್ಲಿ ಮುಂದೆ ಮುಂದೆ ಸಾಗುತ್ತಿದ್ದಂತೆ ತಿರುವು ಬಂದಾಗ ಮುಂದೆ ಏನಿದೆ ಅಂತ ಗೊತ್ತಾಗಲ್ಲ. ಇದನ್ನ ಬದುಕಿಗೆ ಹೋಲಿಸಿದಾಗ ಅಲ್ಲಿ ಕಷ್ಟ ಇದೆಯೋ ಇಲ್ಲಾ ಸುಖ ಕಾದಿದೆಯೋ ಏನೂ ತಿಳಿಯೂದೇ ಇಲ್ಲ....
 
ನಾನೂ ಜೀವನದ ಬಹಳಷ್ಟು ತಿರುವುಗಳನ್ನು ದಾಟಿ ಬಂದಿದ್ದೇನೆ. ಕಷ್ಟ-ಸುಖ ಎರಡನ್ನೂ ಅನುಭವಿಸಿದ್ದೇನೆ. ಬದುಕಿನಲ್ಲಿ ಬಹಳಷ್ಟು ಬಾರಿ ಎಡವಿದ್ದೇನೆ, ಕಲಿತಿದ್ದೇನೆ, ಸಾಧಿಸಿದ್ದೇನೆ!, ಏನೂ ಬೇಡ ಏಂದು ವಿರಮಿಸಿದ್ದೇನೆ.ಜೀವನ ಪ್ರಯಾಣದಲ್ಲಿ ಅನೇಕ ಮಂದಿ ಪರಿಚಯವಾಗಿದ್ದಾರೆ. ಕೆಲವರು ಆತ್ಮೀಯರಾಗಿದ್ದಾರೆ, ಕತ್ತಲಲ್ಲಿ ದೀಪ ಹಚ್ಚಿ ನಡೆಸಿದ್ದಾರೆ. ಮಿಕ್ಕವರು ಜೀವನದ ಪಾಠ ಕಲಿಸಿದ್ದಾರೆ. ನನಗೆ ಎಲ್ಲರೂ ಹಿತವರೇ... ಇಪ್ಪತ್ತು ವಸಂತಗಳಲ್ಲಿ ನಾನು ಮಾಡಿದ ತರ್ಲೆಗಳೆಷ್ಟೋ... ತಪ್ಪುಗಳೆಷ್ಟೋ... ನಾನು ತೀರಾ Negative ಆಗಿ ಯೋಚ್ನೆ ಮಾಡುತ್ತಿರುವಾಗ ನನ್ನಲ್ಲೂ ಆತ್ಮ ವಿಶ್ವಾಸ ಇದೆ. ನಾನೂ ಗೆಲ್ಲಬಲ್ಲೆ, ಸಾಧಿಸಬಲ್ಲೆ ಎಂದು ಹೇಳಿ ಕೊಟ್ಟಿದ್ದು ನನ್ನ ಆತ್ಮೀಯ ಗೆಳೆಯ ಗಣೇಶ್. ಮತ್ತೆ ಮುಖ್ಯವಾಗಿ ಹೇಳಬೇಕೆಂದ್ರೆ ನನ್ನ ಜೀವನದಲ್ಲಿ ಬಹುಕಾಲ ಸ್ನೇಹ ಉಳಿಸಿಕೊಂಡ ಗೆಳೆಯ. ನಿಜಕ್ಕೂ ತುಂಬಾ ಖುಷಿ ಆಗ್ತಿದೆ.ಇವತ್ತಿಗೂ ನನಗೆ ಬೇಸರ ತರಿಸುವ ವಿಷಯ ಅಂದ್ರೆ ನಾನು ಮಾತಾಡುವಾಗ ಎದುರಿರುವ ವ್ಯಕ್ತಿ ಮೇಲೆ ಏನು ಪರಿಣಾಮ ಆಗುತ್ತೆ ಅಂತ ಯೋಚ್ನೆ ಮಾಡ್ದೆ ಮಾತಾಡ್ತೀನಿ. ಇದನ್ನ ನಿಲ್ಲಿಸೋಕೆ ಪ್ರಯತ್ನ ಪಟ್ಟರೂ ಪ್ರಯೋಜನ ಆಗಿಲ್ಲ. ನನ್ನಿಂದ ಯಾರ ಮನಸ್ಸಿಗೆ ನೋವಾಗಿದೆ ನನ್ನ ತಪ್ಪಿಗೆ ಕ್ಷಮೆ ಇರಲಿ!
 
ಈಗ ಎಲ್ಲವನ್ನ ಮರೆತು! ಬದುಕಿನ ಹೊಸ ತಿರುವಿನತ್ತ ಹೆಜ್ಜೆ ಹಾಕುತ್ತಿದ್ದೇನೆ. ಮರೆತು ಅಂತಂದೆ ಆದ್ರೆ ಮರೆಯುವ ನೆಪದಲ್ಲೇ ಎಲ್ಲವನ್ನ ನೆನಪಿಸಿಕೊಳ್ಳುತ್ತಿದ್ದೇನೆ. ಹಾ೦ ನಾನು ನನ್ನ student life ಬಗ್ಗೆ ಹೇಳಿಲ್ಲ. ಅದ್ರಲ್ಲಿ ಹೇಳುವಂಥದ್ದು ಏನೂ ಇಲ್ಲ. ಆದ್ರೆ ನಾನು ಇವರಿಬ್ಬರನ್ನ ಶ್ಲಾಘಿಸಲೇ ಬೇಕು ಕಾಲೇಜಿನಲ್ಲಿ 3 ವರ್ಷ ನನ್ನನ್ನ ಸಹಿಸಿಕೊಂಡಿರುವುದ್ದಕ್ಕೆ. ಕ್ರಪಾ-ದೀಕ್ಷಾ ನನ್ನ ನೀವು ಯಾಕೆ ಸಹಿಸಿಕೊಂಡ್ರಿ ಗೊತ್ತಿಲ್ಲ. ಆದ್ರೆ ನಂಗೆ ಗೊತ್ತು ನನ್ನಿಂದ ನಿಮಗೆ ತುಂಬಾ ತೊಂದ್ರೆ ಆಗಿತ್ತು ಆದ್ರೂ ಒಂದು ಸ್ವಲ್ಪನೂ ಬೇಸರ ಮಾಡಿಕೊಳ್ಳದೆ ನನಗೆ ಸಾಥ್ ಕೊಟ್ಟಿರುವುದಕ್ಕೆ ನಾನು ನಿಮ್ಮಿಬ್ಬರಿಗೂ ಅಭಾರಿ. ಕಾಲೇಜು ಫ್ರೆಂಡ್ಸ್ ಎಲ್ಲರೂ contact ಅಲ್ಲಿದ್ದಿರ ಬಹುದು. ಆದರೆ ನಾನು ಮಾತ್ರ ನಿಮ್ಮೆಲ್ಲರಿಂದ ಬಹು ದೂರ ಉಳಿದಿದ್ದೇನೆ, ಕ್ಷಮಿಸಿ ಅಂತ ಹೇಳಲ್ಲ ಮರೆಯಬೇಡಿ ಅಷ್ಟೆ. ನನ್ನ ಜೊತೆ ಸಹಕರಿಸಿದ, ಪಾಠ ಕಲಿಸಿದ, ಸ್ನೇಹ ಕೊಟ್ಟ, ಪ್ರೀತಿ ಹಂಚಿದ ಪ್ರತಿಯೊಬ್ಬರಿಗೂ ಈ ಪುಟ್ಟ ಹ್ರದಯದಲ್ಲಿ ಸ್ಥಾನ ನೀಡಿದ್ದೇನೆ.
 
ಒಂದು ಮಾತು ಅಂತ ಹೇಳಿ ಮಾತು ಜಾಸ್ತಿ ಆಯ್ತೇನೋ... ಇನ್ನೂ ಹೇಳೋದಿದೆ ಇನ್ನೊಮ್ಮೆ ನೆನಪು ಹಂಚಿಕೊಳ್ಳುವೆ. ಹೊಸ ಹುರುಪು, ಹೊಸ ಹುಮ್ಮಸ್ಸು ಎಲ್ಲವೂ ಹೊಸದು..... ನನಗಾಗಿ "ಹೊಸ ಜೀವನ" ಕಾದಿದೆ......

2 ಕಾಮೆಂಟ್‌ಗಳು: