ನವೆಂಬರ್ 13, 2010

ಹೂದಾನಿಯೊಳಗಣ

 
ನಮ್ಮ ಆಸು ಪಾಸಿನಲ್ಲಿ ಬಹಳಷ್ಟು ವಸ್ತುಗಳಿವೆ. ನಾವು ದಿನಾ ಅದನ್ನ ಎಸೆಯುತ್ತೇವೆ ಪ್ರಯೋಜನಕ್ಕೆ ಬರುವುದಿಲ್ಲ ಎಂದು. ಅಂದ್ರೆ ಅದು ನಮ್ಮ ಪಾಲಿಗೆ ಕಸ. ಕಲಾವಿದನ ಕೈಗೆ ಏನೇ ಸಿಕ್ಕಿದರೂ ಅದು ಒಂದು ಸುಂದರ ಕಲೆಯಾಗಿ ಹೊರ ಹೊಮ್ಮತ್ತದೆ. ಎಷ್ಟರ ಮಟ್ಟಿಗೆ ಎಂದರೆ ಕಚ್ಚಾವಸ್ತುವಿನ ಪರಿಚಯ ತಿಳಿಯದಷ್ಟು. 
 

ನಾವು ನಮ್ಮ ಮನೆಯ ಶೋ ಕೇಸ್ ನಲ್ಲಿಡಲು ಪೇಟೆಗೆ ಹೋಗಿ ವಸ್ತುಗಳನ್ನು ಖರೀದಿ ಮಾಡಿ ತರುತ್ತೇವೆ. ಅವುಗಳು ನಿಜಕ್ಕೂ ಸುಂದರವಾಗಿರುತ್ತವೆ. ಆದರೇ ಇಷ್ಟು ಸುಂದರವಾಗಿರಲು ಸಾಧ್ಯನಾ?!

ಬಿದ್ದು ಕಸವಾಗಿ ತೊಟ್ಟಿ ಸೇರುವ ವಸ್ತುಗಳು ಇಂದು ಮನೆಯ ಶೋ ಕೇಸ್ ಗಳಲ್ಲಿ ಸ್ಥಾನಗಿಟ್ಟಿಸಿವೆ. ಟ್ರೇಡರ್ ಗಳಿಂದ ಕಚ್ಚಾ ವಸ್ತುಗಳನ್ನು ತಂದು ಮಾಡುವ craft ಗಳು ಈ  craftಗಳ ಮುಂದೆ ಮಂಕಾಗುತ್ತವೆ. ಸುಂದರವಾಗಿ ಕಾಣುವ ಈ ವಸ್ತುಗಳೆಲ್ಲವೂ ತಯಾರಾಗಿದ್ದು ಕಸದಿಂದ ಎಂದರೆ ಅಚ್ಚರಿ ಪಡಬೇಕಿಲ್ಲ!
 
ಸುಂದರ ಕಲಾಕೃತಿಗಳನ್ನು ಮಾಡುವುದು ಕಷ್ಟವಲ್ಲ, ಅಂತ ಮನಸ್ಥಿತಿ ನಮ್ಮಲ್ಲಿರಬೇಕು. ಹೊಸತನ್ನು ಹುಡುಕುವ ಮನಸಿರಬೇಕು.

ಹೂದಾನಿಯೊಳಗೆ ಹೂವನ್ನು ಜೋಡಿಸುವ ಕಲೆ, ಕಲಾಕಾರನ ಮನಸ್ಸು ನಮ್ಮದಾಗಿದ್ದರೇ ಯಾವುದೂ ಕಷ್ಟವಲ್ಲ. ಕಸವೂ ಕಲಾಕೃತಿಯಾಗುವುದು ಇವುಗಳಂತೆ.....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ