ಜುಲೈ 11, 2011

ಕೊನೆಗೂ ಬಾಕ್ಸ್ ಆಫೀಸಿನಿಂದ ತೆರೆಗೆ ಬಂತು!


ಹೌದು ನನಗೆ ತುಂಬಾ ಖುಷಿ ಆಗ್ತಿದೆ. ನಂಗೆ ಶುಕ್ರವಾರ ತೆರೆಕಂಡ ಶ್ರೀಮತಿ ಸಿನಿಮಾ ನೋಡುವ ಅವಕಾಶ ಸಿಗಲಿಲ್ಲ. ಆದರೂ ನಾನು ಸಂತೃಪ್ತೆ. ಎರಡು ವರ್ಷಗಳಿಂದ ಬಿಡುಗಡೆ ಭಾಗ್ಯ ಕಾಣದೇ ಅರ್ಧದಲ್ಲೇ ನಿಂತಿದ್ದ ಶ್ರೀಮತಿ ಸ್ಕ್ರೀನ್ ಮೇಲೆ ಕಾಣುವಂತಾಗಿರುವುದಕ್ಕೆ ನಾನು ಇಷ್ಟೊಂದು ಸಂಭ್ರಮಿಸುತ್ತಿರುವುದು. ಯಾಕೇ ಹೀಗೇ ಎಂದು ಆಶ್ಚರ್ಯ ಬೇಡ. ಕಾರಣಾನು ಹೇಳ್ತೀನಿ. ನಾನು ಬೆಂಗಳೂರಿನಲ್ಲಿದ್ದಾಗ ಶ್ರೀಮತಿಯ ಬಗ್ಗೆ ಎ. 24ರ ಹೊಸದಿಗಂತ ಪತ್ರಿಕೆಯಲ್ಲಿ ಬರೆದಿದ್ದೆ. ಶಂಕರೇ ಗೌಡ್ರು ಕೆಂಪೇ ಗೌಡ ಚಿತ್ರದಲ್ಲೇ ಮುಳುಗಿದ್ದರು. ಅದಾಗಲೇ ನಾನು ಸೂಪರ್ ಸ್ಟಾರ್ ಉಪೇಂದ್ರ ಮತ್ತು ಅವರ ಶ್ರೀಮತಿ ಪ್ರಿಯಾಂಕ ಜೊತೆಯಲ್ಲಿ ಅಭಿನಯಿಸಿದ ಈ ಚಿತ್ರದ ಕುರಿತು ಬರೆದನ್ನು ನೆನಪಿಸಿಕೊಳ್ಳುತ್ತೇನೆ. ಅದಾಗಲೇ ಕೆಂಪೇ ಗೌಡ ತೆರೆಕಂಡು ಗೌಡ್ರು ಮೊದಲ ಬಾರಿ ಜಯಿಸಿದ್ದನ್ನು ಮತ್ತೆ ಮತ್ತೆ ಹೇಳಲಾರೆ. ಆದರೆ ಈ ಜಯ ಕಳೆದೆರಡು ವರುಷಗಳಿಂದ ಸುದ್ದಿ ಇಲ್ಲದೆ ಮಲಗಿದ್ದ ಶ್ರೀಮತಿಯನ್ನು ನೆನಪಿಸಿ ಮತ್ತೆ ಅದಕ್ಕೆ ಜೀವಕ್ಕೆ ನೀಡಿತ್ತು!

ನಂತರ ಗೌಡ್ರು ಶ್ರೀಮತಿಯ ನಿದೇರ್ಶಕ ಸಂಪತ್ತನ್ನು ಬದಲಾಯಿಸಿ, ಬಾಕಿಉಳಿದ ಎರಡು ದೃಶ್ಯಗಳನ್ನು ಚಿತ್ರೀಕರಿಸಿ ತೆರೆಗೆ ಬಿಟ್ಟಿದ್ದಾರೆ. ನಾನು ಈ ಚಿತ್ರದ ಬಗ್ಗೆ ಬರೆಯದಿದ್ದರೆ, ಈ ಚಿತ್ರ ಬಿಡುಗಡೆ ಆಗುತ್ತಿರಲಿಲ್ಲ ಎಂದು ಹೇಳಲಾರೆ ಆದರೆ ಶೀಘ್ರದಲ್ಲಿ ಪರದೆ ಮೇಲೆ ಮೂಡಲು ನನ್ನ ಆ ಲೇಖನ ಕಾರಣ ಎನ್ನುವದನ್ನು ತಳ್ಳಿಹಾಕಲಾರೆ. ಅದರಲ್ಲಿ ನನದೂ ಪಾಲಿದೆ ಎನ್ನಲು ನನಗೂ ಹೆಮ್ಮೆ. ಹೊಸದಿಗಂತದಲ್ಲಿ ಸುದ್ದಿ ಬರದಿದ್ದರೆ ಇವತ್ತು ಈ ಚಿತ್ರವನ್ನು ನೋಡಿ ಆನಂದಿಸಿದ ಕೆಲವರಿಗೆ ಹೀಗೊಂದು ಚಿತ್ರ ಇತ್ತು ಎನ್ನುವುದು ಗೊತ್ತಿರಲಿಕ್ಕಿಲ್ಲ!

ಸಿನಿಮಾ ಎಂದರೆ ಗಾವುದ ದೂರ ಓಡುತ್ತಿದ್ದ ನಾನು ಕಳೆದ ಎಂಟು ತಿಂಗಳಲ್ಲಿ ಒಳ್ಳೆಯ ನಂಟನ್ನು ಬೆಳೆಸಿಕೊಂಡಿದ್ದೇನೆ. ನನ್ನಿಂದಾಗಿ ಒಂದು ಚಿತ್ರದ ಬಿಡುಗಡೆ ಸಾಧ್ಯವಾಯಿತಲ್ಲ ಎನ್ನುವ ಸಮಾಧಾನವಿದೆ. ನಾನು ಇಂಡಸ್ಟ್ರಿಯ ಮಧ್ಯೆ ಇರದಿದ್ದರೂ ಅದರ ನಂಟನ್ನು ಬಿಡಲಿಲ್ಲ. ಈಗಲೂ ಅಲ್ಲಿನ ಸಂಬಂಧವನ್ನು ಇರಿಸಿಕೊಂಡಿದ್ದೇನೆ ಎನ್ನಲು ಅಭ್ಯಂತರವಿಲ್ಲ. ಇನ್ನೊಂದು ಸಿನಿಮಾ ಬಿಡಿಗಡೆಯಾಗಲೆಂದು ಕಾಯುತ್ತಿದ್ದೇನೆ. ಅದೇ ಭೀಮೂಸ್ ಬ್ಯಾಂಗ್ ಬ್ಯಾಂಗ್. ಮಾರ್ಚ್ 3ರ ಪತ್ರಿಕೆಯಲ್ಲಿ ಖ್ಯಾತ ನಿದೇಱಶಕ ರಾಜೇಂದ್ರ ಸಿಂಗ್ ಬಾಬು ಅವರ ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಚಿತ್ರದ ಕುರಿತು ಉಲ್ಲೇಖಿಸಿದ್ದೆ. ಆದರೆ ಅದನ್ನು ತೆರೆಯ ಮೇಲೆ ತರುವ ಇರಾದೆಯಲ್ಲಿ ಬಾಬು ಇಲ್ಲವೆಂದು ಕಾಣುತ್ತದೆ. ಬಿಡುಗಡೆಯಾದರೆ ನಾನು ಖುಷಿಪಡುತ್ತೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ