ನಾನೊಂದು ಕಾರ್ಯಕ್ರಮಕ್ಕೆ ವರದಿಗಾಗಿ ಹೋಗಿದ್ದೆ, ಆದರೆ ಅಲ್ಲಿಂದ ಹೊರಬೆಬೇಕಾದರೆ ನನ್ನ ಮನಸ್ಸಿನಲ್ಲಿ ಹತ್ತಾರು ಪ್ರಶ್ನೆಗಳು ಉದ್ಭವಿಸಿದ್ದವು. ಅವುಗಳಿಗೆ ಉತ್ತರ ಸಿಗಬೇಕಿದೆ. ನಾನು ಯಾರನ್ನೂ ವೈಯಕ್ತಿವಾಗಿ ದೂರುತ್ತಿಲ್ಲ. ಇದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ ಎನ್ನುತ್ತಾ ವಿಷಯ ಪ್ರಾರಂಭಿಸುತ್ತೇನೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ ಕಾರ್ಯಕ್ರಮ ಅದಾಗಿತ್ತು. ನಾನು ವೊದಲಿನಿಂದಲೂ ಮೀಸಲಾತಿಯಲ್ಲಿ ನಂಬಿಕೆ ಇರಿಸಿಕೊಂಡಿದ್ದವಳಲ್ಲ. ನಮ್ಮ ಸಾಮರ್ಥ್ಯ ಏನಿದೆಯೋ ಅದಕ್ಕೆ ತಕ್ಕ ಅವಕಾಶ ಸಿಕ್ಕೇ ಸಿಗುತ್ತದೆ ಎನ್ನುವ ನಿಲುವು ನನ್ನದು. ಆದರೆ ಮೀಸಲಾತಿಯಲ್ಲಿ ಸಾಕಷ್ಟು ಸಮುದಾಯದವರಿಗೆ ಒಲವಿದೆ. ಒಂದು ರೀತಿಯಲ್ಲಿ ಸರ್ಕಾರ ಮೀಸಲಾತಿಯನ್ನು ಒದಗಿಸಿರುವುದು ಸರಿಯೇ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜನರನ್ನು ಮುಂದೆ ತರಬೇಕೆನ್ನುವ ಉದ್ದೇಶದಿಂದ ಈ ನೀತಿಯನ್ನು ಜಾರಿಗೊಳಿಸಿದ್ದನ್ನು ತಪ್ಪೆನ್ನುವುದು ತಪ್ಪು. ಆದರೆ ಕಳೆದ ಆರು ದಶಕಗಳಿಂದ ಮೀಸಲಾತಿ ನೀಡಿದ್ದರೂ ಯಾವ ಜನಾಂಗ ಇಂದು ಎದೆ ತಟ್ಟಿ ನಾವು ಅಭಿವೃದ್ಧಿಯಾಗಿದ್ದೇವೆ ಎಂದು ಹೇಳುತ್ತದೆ? ಮೀಸಲಾತಿ ಸಿಕ್ಕಿದ್ದರೂ ಅದನ್ನು ಉಪಯೋಗಿಸುವ ಜಾಣತನವಿಲ್ಲ!
ಹಿಂದುಳಿದ ವರ್ಗಗಳನ್ನು ದಲಿತರು ಎಂದು ಕರೆಯುತ್ತಿದ್ದರು. (ಇದಕ್ಕೆ ನನ್ನ ವಿರೋಧವೂ ಇದೆ. ಯಾವೊಬ್ಬ ವ್ಯಕ್ತಿಯನ್ನು ಜಾತಿ ಆಧಾರದಲ್ಲಿ ನೋಡಬಾರದು ಗುರುತಿಸಬಾರದು. ನಾವೆಲ್ಲರೂ ಮನುಷ್ಯರು. ಜಗತ್ತಿನಲ್ಲಿ ಗಂಡು ಮತ್ತು ಹೆಣ್ಣು ಜಾತಿ ಮಾತ್ರ) ದಲಿತರು ಎಂದು ಕರೆಯಬಾರದು ಎನ್ನುವ ಆದೇಶವನ್ನೂ ಜಾರಿ ಆಗಿದೆ. ಅಷ್ಟೇ ಅಲ್ಲ, ಅವರನ್ನು ಅಸ್ಪೃಶ್ಯರು ಎಂದು ಕರೆಯಲೂ ಅನುಮತಿಯಿಲ್ಲ. ಹೀಗಿರುವಾಗ ಆ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರು ಅನೇಕ ಬಾರಿ ಈ “ಅಸ್ಪೃಶ್ಯರು” ಎನ್ನುವ ಪದವನ್ನು ಬಳಕೆ ಮಾಡಿದ್ದರು. ಇದು ಸರಿಯೇ ಎನ್ನುವುದು ವೊದಲ ಸಂಶಯ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಬಹಳಷ್ಟು ಮಂದಿ ತಮ್ಮನ್ನು ತಾವು ದಲಿತರು, ಅಸ್ಪೃಶ್ಯರು ಎಂದು ಕರೆಸಿಕೊಳ್ಳುತ್ತಾರೆ. ಯಾಕೆ ಈ ರೀತಿ ಕರೆಸಿಕೊಳ್ಳುತ್ತಾರೆ? ಉಳಿದವರಿಂದ ಸಿಂಪತಿಯನ್ನು ಗಿಟ್ಟಿಸಿಕೊಳ್ಳಲೆಂದೇ?
ಮತ್ತೆ ಮೀಸಲಾತಿಯ ಬಗ್ಗೆ ಹೇಳುವುದಾದರೆ, ಮೀಸಲಾತಿಗಾಗಿ ಜಾತಿಯ ವರ್ಗೀಕರಣ ಮಾಡಲಾಗಿದೆ ಎಂದಿದ್ದರು ಸಂಪನ್ಮೂಲ ವ್ಯಕ್ತಿ. ಅವರು ಮಂಡಿಸಿರುವ ಅಷ್ಟೂ ವಿಚಾರಗಳು ಉತ್ತಮವಾಗಿದ್ದವು ಕೆಲವೊಂದು ವಿಷಯಗಳು ಅಕ್ಷರಶಃ ಸತ್ಯ. ಆದರೆ ಎಷ್ಟು ಮಂದಿ ತಮಗೆ ಸಬ್ಸಿಡಿಯಾಗಿ ಸಿಕ್ಕಿರುವ ಹಣವನ್ನು ಸದ್ವಿನಿಯೋಗ ಮಾಡಿ, ಸಮಾಜದಲ್ಲಿ ಉತ್ತಮ ಸ್ಥಿತಿಗೆ ಬಂದಿದ್ದಾರೆ? ಪ್ರತಿ ವರ್ಷ ಕೋಟಿ ಗಟ್ಟಲೆ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತದೆ. ಅದರಲ್ಲಿ ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪವಾದರೂ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕೈ ಸೇರುತ್ತದೆ. ಸಿಕ್ಕ ಹಣವನ್ನು ಉತ್ತಮವಾಗಿ ಬಳಸಿಕೊಂಡಿದ್ದರೆ, ಕಳೆದ ಆರು ದಶಕಗಳಲ್ಲಿ ಹಿಂದುಳಿದ ವರ್ಗದವರು ಸ್ವಲ್ಪ ಮಟ್ಟಿಗಾದರೂ ಅಭಿವೃದ್ಧಿಯಾಗಬೇಕಿತ್ತು. ಆದರೆ ಫಲಿತಾಂಶ ಮಾತ್ರ ಸೊನ್ನೆ. ಯಾಕೆ ಹೀಗೆ? ಸರ್ಕಾರದ ಹಣ ಎನ್ನುವ ಅಸಡ್ಡೆಯೇ? ಅಷ್ಟೇ ಅಲ್ಲ. ಅವರಿಗೆ ತೆರಿಗೆಯಲ್ಲೂ ವಿನಾಯಿತಿ ಇದೆ. ಎತ್ತ ಕಡೆ ಹೋದರೂ ವಿನಾಯಿತಿ ಇದೆ. ಆದರೆ ಅವರ ಪ್ರಗತಿಯನ್ನು ನೋಡಿದರೆ ಯಾವ ವಿಚಾರದಲ್ಲಿಯೂ ಸಾಧನೆಯಿಲ್ಲ. ಹಿಂದುಳಿದ ವರ್ಗದವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿ ಅವರನ್ನು ಅಭಿವೃದ್ಧಿ ಪಡಿಸಿಬೇಕು ಎನ್ನುವ ಮಹತ್ತರವಾದ ದೃಷ್ಟಿಯಿಂದ ವರ್ಗೀಕರಣ ಆರಂಭವಾಗಿದೆ. ಅಂದರೆ ಒಂದು ಸಮುದಾಯ ಅಥವಾ ಜಾತಿ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಸಾಧಿಸಿದೆ ಎಂದಾದಾಗ ಅದನ್ನು ಪರಿಶಿಷ್ಟ ವರ್ಗದಿಂದ ತೆರವುಗೊಳಿಸಿ, ಅದಕ್ಕಿಂತ ಹಿಂದುಳಿದಿರುವ ಇನ್ನಾವುದಾದರೂ ಬೇರೆ ಜಾತಿಯನ್ನು ಪರಿಶಿಷ್ಟ ವರ್ಗ ಎಂದು ಗುರುತಿಸಿ ಅದರ ಪ್ರಗತಿಗಾಗಿ ಪಣ ತೊಡುವುದು. (ನನ್ನ ತಿಳುವಳಿಕೆ ಸರಿಯಾಗಿದೆ ಎಂದು ಭಾವಿಸಿದ್ದೇನೆ) ಆದರೆ ನಾಗ. ಪರಿಶಿಷ್ಟ ವರ್ಗದಿಂದ ಯಾವ ಜಾತಿಯೂ ತೆರವಾಗುತ್ತಿರುವುದನ್ನು ಕಾಣುತ್ತಿಲ್ಲ. ಬದಲಾಗಿ ಹೆಚ್ಚು ಹೆಚ್ಚು ಜಾತಿಗಳು ಸೇರ್ಪಡೆಗೊಳ್ಳುತ್ತಿರುವುದಷ್ಟೇ ನಮ್ಮ ಗಮನಕ್ಕೆ ಬರುತ್ತಿದೆ. ಇದ್ಯಾಕೆ ಹೀಗೆ? ಯಾಕೆ ಇದೀಗ ಗುರುತಿಸಿರುವ ಹಿಂದುಳಿದ ವರ್ಗ ಮುಂದೆ ಬರಲು ಸಾಧ್ಯವಾಗುವುದೇ ಇಲ್ಲವೇ?
ಅದೇ ಕಾರ್ಯಕ್ರಮದಲ್ಲಿ ವಿಚಾರ ಮಂಡಿಸಿದ ಇನ್ನೋರ್ವ ವ್ಯಕ್ತಿ. ಅವರು ಪ್ರೊಫೆಸರ್. ಅವರ ಮಾತುಗಳನ್ನು ಕೇಳಿಸಿಕೊಂಡ ನನಗೆ ಆ ಬಗ್ಗೆ ಸಂಶಯವಿದೆ. ಪ್ರಾಯಶಃ ಆ ವ್ಯಕ್ತಿ ಮೀಸಲಾತಿ ಮೇಲೆ ಆಯಕೆಯಾಗಿರಬೇಕು. ಇರಲಿ ಬಿಡಿ. ಅವರು ಅಸ್ಪೃಶ್ಯರ ಬಗ್ಗೆ ವಿಶ್ಲೇಷಣೆ ಮಾಡಿದ್ದು ಹೀಗೆ, ಯಾರು ಸುಂದರವಾಗಿ ಕಾಣುವುದಿಲ್ಲವೋ, ಅಧಿಕಾರಯುತವಾಗಿ ಪಡೆದುಕೊಳ್ಳು ಯಾರಿಂದ ಸಾಧ್ಯವಿಲ್ಲವೋ, ಶಿಕ್ಷಣ ಪಡೆದಿಲ್ಲವೋ ಇವರು ಹಿಂದುಳಿದ ವರ್ಗದವರು. ಇಲ್ಲಿಯೂ ಅಷ್ಟೇ. ಸುಂದರವಾಗಿರುವುದು ಎಂಬ ವಿಚಾರವನ್ನೇ ತೆಗೆದುಕೊಳ್ಳುತ್ತೇನೆ. ಉಳಿದ ವಿಚಾರಗಳ ಬಗ್ಗೆ ಹೆಚ್ಚಿನ ಕುತೂಹಲವಿಲ್ಲ! ಅವರು ಒಬ್ಬ ಪ್ರೊಫೆಸರ್ ಆಗಿ, ಒಬ್ಬ ವ್ಯಕ್ತಿಯ ಸೌಂದರ್ಯ ಆ ವ್ಯಕ್ತಿ ಯಾವ ವರ್ಗಕ್ಕೆ ಸೇರಬೇಕು ಎನ್ನುವುದನ್ನು ದೃqsಕರಿಸುತ್ತದೆಯೇ? (ನನಗೆ ಗೊತ್ತಿಲ್ಲ, ತಿಳಿಯಬೇಕಿತ್ತು) ಈ ಜಗತ್ತಿಲ್ಲ ಯಾವೊಬ್ಬ ವ್ಯಕ್ತಿಯೂ ಒಬ್ಬರಂತೆ ಇನ್ನೊಬ್ಬರಿಲ್ಲ. ಯಾರನ್ನು ಹೋಲಿಸಿಯೂ ಸುಂದರ ಎಂದು ಹೇಳಲು ಸಾಧ್ಯವಿಲ್ಲ. ಹಾಗಿರುವಾಗ ಸೌಂದರ್ಯವನ್ನು ಹೇಗೆ ಆಧಾರವಾಗಿಸಲಾಗುತ್ತದೆ?
ಹೀಗೆ ಹಲವಾರು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಹುಟ್ಟಿಕೊಂಡವು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ